ಮಾರ್ಕ 10
  • 1 ಅಲ್ಲಿಂದ ಆತನು ಎದ್ದು ಯೊರ್ದನಿಗೆ ಆಚೆ ಕಡೆಗಿರುವ ಯೂದಾಯದ ಮೇರೆ ಗಳಿಗೆ ಬಂದನು; ಜನರು ತಿರಿಗಿ ಆತನ ಬಳಿಗೆ ಕೂಡಿ ಬರಲು ಆತನು ತನ್ನ ವಾಡಿಕೆಯಂತೆ ಅವರಿಗೆ ಮತ್ತೆ ಬೋಧಿಸಿದನು.
  • 2 ಆಗ ಫರಿಸಾಯರು ಆತನ ಬಳಿಗೆ ಬಂದು ಆತನನ್ನು ಶೋಧಿಸುವದಕ್ಕಾಗಿ ಆತನಿಗೆ--ಒಬ್ಬ ಮನುಷ್ಯನು ತನ್ನ ಹೆಂಡತಿಯನ್ನು ಬಿಟ್ಟು ಬಿಡುವದು ನ್ಯಾಯವೋ ಎಂದು ಕೇಳಿದರು.
  • 3 ಆತನು ಪ್ರತ್ಯುತ್ತರವಾಗಿ ಅವರಿಗೆ--ಮೋಶೆಯು ನಿಮಗೆ ಏನು ಅಪ್ಪಣೆ ಕೊಟ್ಟನು ಎಂದು ಕೇಳಿದನು.
  • 4 ಅದಕ್ಕೆ ಅವರು--ತ್ಯಾಗಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಅಪ್ಪಣೆಕೊಟ್ಟನು ಅಂದರು.
  • 5 ಯೇಸು ಪ್ರತ್ಯುತ್ತರವಾಗಿ ಅವರಿಗೆ--ಅವನು ನಿಮ್ಮ ಹೃದಯದ ಕಾಠಿಣ್ಯದ ನಿಮಿತ್ತವಾಗಿ ನಿಮಗೆ ಈ ಆಜ್ಞೆಯನ್ನು ಬರೆದನು.
  • 6 ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು ಅವರನ್ನು ಗಂಡು ಹೆಣ್ಣಾಗಿ ಮಾಡಿದನು.
  • 7 ಈ ಕಾರಣದಿಂದ ಒಬ್ಬ ಮನುಷ್ಯನು ತನ್ನ ತಂದೆಯನ್ನೂ ತಾಯಿಯನ್ನೂ ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.
  • 8 ಅವರಿಬ್ಬರು ಒಂದೇ ಶರೀರವಾಗಿರುವರು; ಹೀಗೆ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.
  • 9 ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸದಿರಲಿ ಅಂದನು.
  • 10 ಆತನ ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಆತನಿಗೆ ತಿರಿಗಿ ಕೇಳಿದರು.
  • 11 ಅದಕ್ಕೆ ಆತನು ಅವರಿಗೆ-- ಯಾವನಾದರೂ ತನ್ನ ಹೆಂಡತಿ ಯನ್ನು ಬಿಟ್ಟು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿ ದ್ದಾನೆ.
  • 12 ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ ಅಂದನು.
  • 13 ಆಗ ಕೆಲವರು ಚಿಕ್ಕ ಮಕ್ಕಳನ್ನು ಆತನು ಮುಟ್ಟಬೇಕೆಂದು ಆತನ ಬಳಿಗೆ ಅವುಗಳನ್ನು ತಂದರು; ಆದರೆ ಆತನ ಶಿಷ್ಯರು ತಂದವರನ್ನು ಗದರಿಸಿದರು.
  • 14 ಆದರೆ ಯೇಸು ಅದನ್ನು ನೋಡಿದಾಗ ಬಹಳವಾಗಿ ಕೋಪಗೊಂಡು ಅವರಿಗೆ--ಚಿಕ್ಕಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡ ಬೇಡಿರಿ; ಯಾಕಂದರೆ ದೇವರ ರಾಜ್ಯವು ಇಂಥವರದೇ ಅಂದನು.
  • 15 ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಯಾವನಾದರೂ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿದ್ದರೆ ಅವನು ಅದರೊಳಗೆ ಪ್ರವೇಶಿಸುವದಿಲ್ಲ.
  • 16 ಇದಲ್ಲದೆ ಆತನು ಆ ಮಕ್ಕಳನ್ನು ಎತ್ತಿಕೊಂಡು ತನ್ನ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದನು.
  • 17 ಆತನು ದಾರಿಯಲ್ಲಿ ಮುಂದಕ್ಕೆ ಹೋದಾಗ ಒಬ್ಬನು ಓಡುತ್ತಾ ಬಂದು ಆತನ ಮುಂದೆ ಮೊಣಕಾಲೂರಿ--ಒಳ್ಳೇ ಬೋಧಕನೇ, ನಾನು ನಿತ್ಯಜೀವ ವನ್ನು ಬಾಧ್ಯವಾಗಿ ಹೊಂದುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಿದನು.
  • 18 ಯೇಸು ಅವನಿಗೆ --ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ.
  • 19 ವ್ಯಭಿಚಾರ ಮಾಡಬಾರದು, ಕೊಲ್ಲಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸ ಮಾಡಬಾರದು, ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆ ಯಲ್ಲಾ ಅಂದನು.
  • 20 ಆಗ ಅವನು ಪ್ರತ್ಯುತ್ತರವಾಗಿ ಆತನಿಗೆ--ಬೋಧಕನೇ, ನಾನು ಇವೆಲ್ಲವುಗಳನ್ನು ನನ್ನ ಬಾಲ್ಯದಿಂದಲೇ ಅನುಸರಿಸಿದ್ದೇನೆ ಅಂದನು.
  • 21 ಆಗ ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ--ನಿನಗೆ ಒಂದು ಕಡಿಮೆ ಇದೆ; ನೀನು ಹೊರಟುಹೋಗಿ ನಿನಗಿರುವದನ್ನೆಲ್ಲಾ ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ಮತ್ತು ನೀನು ಬಂದು ಶಿಲುಬೆಯನ್ನು ತಕ್ಕೊಂಡು ನನ್ನನ್ನು ಹಿಂಬಾಲಿಸು ಅಂದ
  • 22 ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು; ಯಾಕಂದರೆ ಅವನಿಗೆ ಬಹಳ ಆಸ್ತಿಯಿತ್ತು.
  • 23 ಆಗ ಯೇಸು ಸುತ್ತಲೂ ನೋಡಿ ತನ್ನ ಶಿಷರಿಗೆ --ಐಶ್ವರ್ಯವುಳ್ಳವರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ ಅಂದನು.
  • 24 ಆಗ ಶಿಷ್ಯರು ಆತನ ಮಾತುಗಳಿಗೆ ಬೆರಗಾದರು; ಆದರೆ ಯೇಸು ತಿರಿಗಿ ಉತ್ತರಕೊಟ್ಟು ಅವರಿಗೆ-- ಮಕ್ಕಳಿರಾ, ಐಶ್ವರ್ಯದಲ್ಲಿ ನಂಬಿಕೆ ಇಟ್ಟವರು ದೇವರ ರಾಜ್ಯದಲ್ಲಿ ಪ್ರವೇಶಿಸುವದು ಎಷ್ಟೋ ಕಷ್ಟ.
  • 25 ಒಬ್ಬ ಐಶ್ವರ್ಯವಂತನು ದೇವರ ರಾಜ್ಯದೊಳಗೆ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ ಅಂದನು.
  • 26 ಅದಕ್ಕೆ ಅವರು ಮಿತಿವಿಾರಿ ಆಶ್ಚರ್ಯಪಟ್ಟು ತಮ್ಮೊಳಗೆ--ಹಾಗಾದರೆ ರಕ್ಷಿಸಲ್ಪಡುವದು ಯಾರಿಗೆ ಸಾಧ್ಯ ಎಂದು ಅಂದು ಕೊಂಡರು.
  • 27 ಆಗ ಯೇಸು ಅವರನ್ನು ದೃಷ್ಟಿಸುತ್ತಾ--ಮನುಷ್ಯರಿಗೆ ಇದು ಅಸಾಧ್ಯವಾಗಿದೆ; ಆದರೆ ದೇವರಿಗೆ ಅಲ್ಲ; ಯಾಕಂದರೆ ದೇವರಿಗೆ ಎಲ್ಲವೂ ಸಾಧ್ಯವಾಗಿವೆ ಅಂದನು.
  • 28 ತರುವಾಯ ಪೇತ್ರನು ಆತನಿಗೆ-- ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಲಾರಂಭಿಸಿದನು.
  • 29 ಅದಕ್ಕೆ ಯೇಸು ಪ್ರತ್ಯುತ್ತರವಾಗಿ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ; ಯಾವನಾದರೂ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಯನ್ನಾಗಲೀ ಸಹೋದರರನ್ನಾಗಲೀ ಸಹೋದರಿಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯ ನ್ನಾಗಲೀ ಬಿಟು
  • 30 ಅವನು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ನೂರರಷ್ಟು ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿ ರನ್ನೂ ಮಕ್ಕಳನ್ನೂ ಭೂಮಿಯನ್ನೂ ಹೊಂದುವದಲ್ಲದೆ ಬರುವ ಲೋಕದಲ್ಲಿ ನಿತ್ಯ ಜೀವವನ್ನು ಹೊಂದುವನು.
  • 31 ಆದರೆ ಮೊದಲಿನವರಾದ ಅನೇಕರು ಕಡೆಯವ ರಾಗುವರು ಮತ್ತು ಕಡೆಯವರಾದವರು ಮೊದಲಿನ ವರಾಗುವರು ಅಂದನು.
  • 32 ಆಗ ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು; ಮತ್ತು ಯೇಸು ಅವರ ಮುಂದಾಗಿ ಹೋದದ್ದರಿಂದ ಅವರು ಆಶ್ಚರ್ಯಪಟ್ಟರು; ಮತ್ತು ಆತನನ್ನು ಹಿಂಬಾಲಿಸುತ್ತಿದ್ದಾಗ ಭಯಪಟ್ಟರು. ಆತನು ತನ್ನ ಹನ್ನೆರಡು ಮಂದಿಯನ್ನು ತಿರಿಗಿ ಕರೆದು ತನಗೆ ಸಂಭವಿಸುವವುಗಳು ಯಾವವೆಂದು ಅವರಿ
  • 33 ಇಗೋ, ನಾವು ಯೆರೂಸಲೇ ಮಿಗೆ ಹೋಗುತ್ತೇವೆ; ಮತ್ತು ಮನುಷ್ಯಕುಮಾರನು ಪ್ರಧಾನಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡು ವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳಿಗೆ ಒಪ್ಪಿಸುವರು.
  • 34 ಮತ್ತು ಅವರು ಆತನನ್ನು ಹಾಸ್ಯ ಮಾಡಿ ಕೊರಡೆಯಿಂದ ಹೊಡೆದು ಆತನ ಮೇಲೆ ಉಗುಳಿ ಆತನನ್ನು ಕೊಲ್ಲುವರು; ಮತ್ತು ಮೂರನೇ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
  • 35 ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರು ಆತನ ಬಳಿಗೆ ಬಂದು--ಬೋಧಕನೇ, ನಾವು ಅಪೇಕ್ಷಿಸುವದನ್ನು ನೀನು ನಮಗೋಸ್ಕರ ಮಾಡಬೇಕೆಂದು ನಾವು ಬಯಸುತ್ತೇವೆ ಅಂದರು.
  • 36 ಅದಕ್ಕೆ ಆತನು ಅವರಿಗೆ--ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ ಎಂದು ಕೇಳಲು
  • 37 ಅವರು ಆತನಿಗೆ--ನಾವು ನಿನ್ನ ಮಹಿಮೆಯಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕೂತುಕೊಳ್ಳುವಂತೆ ನಮಗೆ ಅನುಗ್ರಹಿಸು ಅಂದರು.
  • 38 ಆದರೆ ಯೇಸು ಅವರಿಗೆ -- ನೀವು ಏನು ಬೇಡಿಕೊಳ್ಳುತ್ತೀರೋ ನಿಮಗೆ ತಿಳಿಯದು; ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರೋ? ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದುವಿರೋ ಅಂದನು.
  • 39 ಅದಕ್ಕೆ ಅವರು ಆತನಿಗೆ--ನಮ್ಮಿಂದಾಗುವದು ಅಂದರು. ಆದರೆ ಯೇಸು ಅವರಿಗೆ--ನಾನು ಕುಡಿ ಯುವ ಪಾತ್ರೆಯಲ್ಲಿ ನೀವು ನಿಜವಾಗಿಯೂ ಕುಡಿಯು ವಿರಿ; ಮತ್ತು ನಾನು ಹೊಂದುವ ಬಾಪ್ತಿಸ್ಮದಿಂದ ನೀವು ಬಾಪ್ತಿಸ್ಮ ಹೊಂದುವಿರಿ.
  • 40 ಆದರೆ ನನ್ನ ಬಲಗಡೆಯಲ್ಲಿ ಮತ್ತು ನನ್ನ ಎಡಗಡೆಯಲ್ಲಿ ಕೂತು ಕೊಳ್ಳುವಂತೆ ಅನುಗ್ರಹ ಮಾಡುವದು ನನ್ನದಲ್ಲ; ಅದು ಯಾರಿ ಗೋಸ್ಕರ ಸಿದ್ಧಮಾಡಲ್ಪಟ್ಟಿದೆಯೋ ಅವರಿಗೆ ಕೊಡ ಲ್ಪಡುವದು ಅಂದನು.
  • 41 ಆ ಹತ್ತು ಮಂದಿಯು ಅದನ್ನು ಕೇಳಿದಾಗ ಯಾಕೋಬ ಯೋಹಾನರ ಮೇಲೆ ಅವರು ಬಹಳವಾಗಿ ಕೋಪಗೊಳ್ಳಲಾರಂಭಿಸಿದರು.
  • 42 ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ--ಅನ್ಯಜನಗಳನ್ನು ಆಳುವದಕ್ಕೆ ನೇಮಿಸಲ್ಪ ಟ್ಟವರು ಅವರ ಮೇಲೆ ದೊರೆತನ ಮಾಡುತ್ತಾರೆ; ಮತ್ತು ಅವರಲ್ಲಿ ದೊಡ್ಡ ವರು ಅವರ ಮೇಲೆ ಅಧಿಕಾರ ಮಾಡುತ್ತಾರೆಂದು ನೀವು ಬಲ್ಲಿರಿ.
  • 43 ಆದರೆ ನಿಮ್ಮೊಳಗೆ ಹಾಗಿರಬಾರದು; ಮತ್ತು ನಿಮ್ಮೊಳಗೆ ದೊಡ್ಡವನಾಗಿರ ಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು.
  • 44 ನಿಮ್ಮಲ್ಲಿ ಮುಖ್ಯಸ್ಥನಾಗಬೇಕೆಂದಿರುವವನು ಎಲ್ಲರಿಗೆ ಸೇವಕನಾಗಿರಬೇಕು.
  • 45 ಯಾಕಂದರೆ ಮನುಷ್ಯಕು ಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಆದರೆ ಸೇವೆ ಮಾಡುವದಕ್ಕೂ ತನ್ನ ಪ್ರಾಣವನ್ನು ಅನೇಕರಿಗೋಸ್ಕರ ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.
  • 46 ತರುವಾಯ ಅವರು ಯೆರಿಕೋವಿಗೆ ಬಂದರು; ಆತನು ತನ್ನ ಶಿಷ್ಯರೊಡನೆಯೂ ಬಹುಸಂಖ್ಯೆಯ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗನಾದ ಕುರುಡ ಬಾರ್ತಿಮಾಯನು ಹೆದ್ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆಬೇಡು ತ್ತಿದ್ದನು.
  • 47 ಆತನು ನಜರೇತಿನ ಯೇಸು ಎಂದು ಅವನು ಕೇಳಿದಾಗ ಕೂಗಲಾರಂಭಿಸಿ--ಯೇಸುವೇ, ದಾವೀದನಕುಮಾರನೇ, ನನ್ನನ್ನು ಕರುಣಿಸು ಅಂದನು.
  • 48 ಅವನು ಸುಮ್ಮನಿರುವಂತೆ ಅನೇಕರು ಅವನಿಗೆ ಖಂಡಿತವಾಗಿ ಹೇಳಿದರು; ಆದರೆ ಅವನು ಇನ್ನೂ ಹೆಚ್ಚಾಗಿ--ದಾವೀದನಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿದನು.
  • 49 ಆಗ ಯೇಸು ನಿಂತುಕೊಂಡು ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು ಅವರು ಆ ಕುರುಡನನ್ನು ಕರೆದು--ಸಮಾಧಾನವಾಗಿರು; ಏಳು, ಆತನು ನಿನ್ನನ್ನು ಕರೆಯುತ್ತಾನೆ ಎಂದು ಅವನಿಗೆ ಹೇಳಿದರು.
  • 50 ಅವನು ತನ್ನ ಉಡುಪನ್ನು ತೆಗೆದುಹಾಕಿ ಎದ್ದು ಯೇಸುವಿನ ಬಳಿಗೆ ಬಂದನು.
  • 51 ಯೇಸು ಅವನಿಗೆ--ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ ಎಂದು ಕೇಳಲು ಆ ಕುರುಡನು ಆತನಿಗೆ--ಕರ್ತನೇ, ನಾನು ನನ್ನ ದೃಷ್ಟಿಯನ್ನು ಹೊಂದುವಂತೆ ಮಾಡಬೇಕು ಅಂದನು.
  • 52 ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು.