ನ್ಯಾಯಸ್ಥಾಪಕರು 1
  • 1 ¶ ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್‌ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.
  • 2 ಅದಕ್ಕೆ ಕರ್ತನು--ಯೂದನು ಹೋಗಲಿ; ಇಗೋ, ನಾನು ಆ ದೇಶವನ್ನು ಅವನ ಕೈಯಲ್ಲಿ ಒಪ್ಪಿಸಿಕೊಟ್ಟಿ ದ್ದೇನೆ ಅಂದನು.
  • 3 ಯೂದನು ತನ್ನ ಸಹೋದರನಾದ ಸಿಮೆಯೋನನಿಗೆ--ನೀನು ನನ್ನ ಸಂಗಡ ನನ್ನ ಭಾಗಕ್ಕೆ ಬಾ, ಕಾನಾನ್ಯರ ಮೇಲೆ ಯುದ್ಧಮಾಡೋಣ; ನಾನು ಹಾಗೆಯೇ ನಿನ್ನ ಸಂಗಡ ನಿನ್ನ ಭಾಗಕ್ಕೆ ಬರುವೆನು ಅಂದನು. ಹೀಗೆ ಸಿಮೆಯೋನನು ಅವನ ಸಂಗಡ ಹೋದನು.
  • 4 ಯೂದನು ಹೋದಾಗ ಕರ್ತನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟನು. ಬೆಜೆಕಿನಲ್ಲಿ ಇವರು ಅವರಲ್ಲಿ ಹತ್ತು ಸಾವಿರ ಜನರನ್ನು ಕೊಂದರು.
  • 5 ಅವರು ಬೆಜೆಕಿನಲ್ಲಿ ಅದೋನೀಬೆಜೆಕನನ್ನು ಕಂಡು ಅವನಿಗೆ ವಿರೋಧವಾಗಿ ಯುದ್ಧಮಾಡಿ ಅಲ್ಲಿ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಕೊಂದುಹಾಕಿದರು.
  • 6 ಆದರೆ ಅದೋನೀಬೆಜೆಕನು ಓಡಿಹೋದದರಿಂದ ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿ ಹಾಕಿ ದರು.
  • 7 ಆಗ ಅದೋನೀಬೆಜೆಕನು--ನಾನು ಕೈಕಾಲು ಗಳ ಹೆಬ್ಬೆರಳುಗಳನ್ನು ಕತ್ತರಿಸಿದ ಎಪ್ಪತ್ತು ಮಂದಿ ಅರಸುಗಳು ನನ್ನ ಮೇಜಿನ ಕೆಳಗೆ ತಮ್ಮ ಆಹಾರ ವನ್ನು ಕೂಡಿಸಿದರು; ನಾನು ಹೇಗೆ ಮಾಡಿದೆನೋ ಹಾಗಾಯೇ ದೇವರು ನನಗೆ ಮುಯ್ಯಿಗೆ ಮುಯ್ಯಿಮಾಡಿದ್ದಾನೆ ಅಂದನು. ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದರು; ಅವನು ಅಲ್ಲಿ ಸತ್ತನು.
  • 8 ಯೂದನ ಮಕ್ಕಳು ಯೆರೂಸಲೇಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
  • 9 ತರುವಾಯ ಯೂದನ ಮಕ್ಕಳು ಬೆಟ್ಟದಲ್ಲಿಯೂ ದಕ್ಷಿಣದಲ್ಲಿಯೂ ತಗ್ಗಿನ ಲ್ಲಿಯೂ ವಾಸಿಸಿದ ಕಾನಾನ್ಯರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋದರು.
  • 10 ಯೂದನು ಪೂರ್ವದಲ್ಲಿ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿನಲ್ಲಿ ವಾಸವಾಗಿದ್ದ ಕಾನಾನ್ಯರ ಮೇಲೆ ಹೋಗಿ ಶೇಷೈ, ಅಹೀಮನ್‌, ತಲ್ಮೈರನ್ನು ಕೊಂದುಹಾಕಿದನು.
  • 11 ಅಲ್ಲಿಂದ ದೆಬೀರಿನಲ್ಲಿ ವಾಸ ವಾಗಿರುವವರಿಗೆ ವಿರೋಧವಾಗಿ ಹೋದರು; ದೆಬೀ ರಿಗೆ ಪೂರ್ವದಲ್ಲಿ ಕಿರ್ಯತ್‌ಸೇಫೆರ್‌ ಎಂಬ ಹೆಸ ರಿತ್ತು.
  • 12 ಕಾಲೇಬನು--ಕಿರ್ಯತೆಸೇಫೆರನ್ನು ಹೊಡೆದು ತೆಗೆದುಕೊಳ್ಳುವವನಿಗೆ ನನ್ನ ಕುಮಾರ್ತೆಯಾದ ಅಕ್ಷಾ ಳನ್ನು ಹೆಂಡತಿಯಾಗಿ ಕೊಡುವೆನು ಎಂದು ಹೇಳಿದ್ದನು.
  • 13 ಆಗ ಕಾಲೇಬನ ತಮ್ಮನು ಕೆನಜನ ಮಗನಾದ ಒತ್ನೀಯೇಲನು ಅದನ್ನು ಹಿಡಿದನು. ಆಗ ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
  • 14 ಅವಳು ಅವನ ಬಳಿಗೆ ಹೋಗುವಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿದವಳಾಗಿ ಕತ್ತೆಯಿಂದ ಇಳಿದಳು; ಕಾಲೇಬನು ಅವಳಿಗೆ--ನಿನಗೆ ಏನು ಬೇಕು ಅಂದನು.
  • 15 ಅವಳು ಅವನಿಗೆ--ನನಗೆ ಆಶೀರ್ವಾದಕೊಡು; ನೀನು ದಕ್ಷಿಣ ಭೂಮಿಯನ್ನು ನನಗೆ ಕೊಟ್ಟುಬಿಟ್ಟೆ ಯಲ್ಲಾ, ನೀರು ಬುಗ್ಗೆಗಳನ್ನು ಸಹ ಕೊಡು ಅಂದಳು. ಕಾಲೇಬನು ಮೇಲಿನ ಬುಗ್ಗೆಗಳನ್ನೂ ಕೆಳಗಿನ ಬುಗ್ಗೆಗಳನ್ನೂ ಅವಳಿಗೆ ಕೊಟ್ಟನು.
  • 16 ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.
  • 17 ಯೆಹೂದ್ಯರು ತಮ್ಮ ಸಹೋದರರಾದ ಸಿಮೆ ಯೋನ್ಯರ ಸಂಗಡ ಹೊರಟು ಚೆಫತ್‌ನಲ್ಲಿ ವಾಸವಾಗಿ ರುವ ಕಾನಾನ್ಯರನ್ನು ಕೊಂದು ಆ ಪಟ್ಟಣವನ್ನು ನಿರ್ಮೂಲ ಮಾಡಿದರು. ಆ ಪಟ್ಟಣವು ಹೋರ್ಮಾ ಎಂದು ಕರೆಯಲ್ಪಟ್ಟಿತು.
  • 18 ಇದಲ್ಲದೆ ಯೂದನು ಗಾಜಾವನ್ನೂ ಅದರ ಮೇರೆಯನ್ನೂ ಅಷ್ಕೆಲೋನನ್ನ್ನೂ ಅದರ ಮೇರೆಯನ್ನೂ ಎಕ್ರೋನನ್ನ್ನೂ ಅದರ ಮೇರೆ ಯನ್ನೂ ತೆಗೆದುಕೊಂಡನು.
  • 19 ಕರ್ತನು ಯೂದನ ಸಂಗಡ ಇದ್ದದರಿಂದ ಅವನು ಬೆಟ್ಟದ ನಿವಾಸಿಗಳನ್ನು ಹೊರಡಿಸಿಬಿಟ್ಟನು; ಆದರೆ ತಗ್ಗಿನ ನಿವಾಸಿಗಳಿಗೆ ಕಬ್ಬಿ ಣದ ರಥಗಳಿದ್ದದರಿಂದ ಅವನು ಅವರನ್ನು ಹೊರ ಡಿಸಲಾರದೆ ಹೋದನು.
  • 20 ಮೋಶೆಯು ಹೇಳಿದ ಪ್ರಕಾರ ಅವರು ಹೆಬ್ರೋನನ್ನ್ನು ಕಾಲೇಬನಿಗೆ ಕೊಟ್ಟರು. ಅವನು ಅನಾಕನ ಮೂವರು ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು.
  • 21 ಬೆನ್ಯಾವಿಾನನ ಮಕ್ಕಳು ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲಿಲ್ಲ. ಆದರೆ ಯೆಬೂಸಿಯರು ಈ ದಿನದ ವರೆಗೆ ಬೆನ್ಯಾವಿಾ ನನ ಮಕ್ಕಳ ಸಂಗಡ ವಾಸವಾಗಿದ್ದಾರೆ.
  • 22 ಇದಲ್ಲದೆ ಯೋಸೇಫನ ಮನೆಯವರು ಬೇತೇಲಿಗೆ ಹೋದರು. ಕರ್ತನು ಅವರ ಸಂಗಡ ಇದ್ದನು.
  • 23 ಆದರೆ ಮೊದಲು ಲೂಜ್‌ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಪಾಳತಿ ನೋಡಲು ಯೋಸೇಫನ ಮನೆಯವರು ಕಳುಹಿಸಿದರು.
  • 24 ಪಾಳತಿಯವರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ--ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು; ನಾವು ನಿನಗೆ ಕರುಣೆ ತೋರಿಸುವೆವು ಅಂದರು.
  • 25 ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ ಅವರು ಬಂದು ಪಟ್ಟಣವನ್ನು ಕತ್ತಿಯಿಂದ ಹೊಡೆದು ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.
  • 26 ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಕಟ್ಟಿ ಅದಕ್ಕೆ ಲೂಜ್‌ ಎಂದು ಹೆಸರಿಟ್ಟನು. ಈ ವರೆಗೂ ಅದಕ್ಕೆ ಅದೇ ಹೆಸರು.
  • 27 ಮನಸ್ಸೆಯವರು ಬೇತ್‌ಷೆಯಾನ್‌ ತಾನಾಕ್‌ ದೋರ್‌ ಇಬ್ಲೆಯಾಮ್‌ ಮೆಗಿದ್ದೋ ಎಂಬ ಪಟ್ಟಣ ಗಳನ್ನು ಅವುಗಳ ಗ್ರಾಮಗಳನ್ನು ಸ್ವಾಧೀನಮಾಡಿ ಕೊಳ್ಳಲಿಲ್ಲ. ಆದದರಿಂದ ಕಾನಾನ್ಯರು ಆ ಪ್ರಾಂತ ಗಳಲ್ಲೇ ವಾಸಿಸುವದಕ್ಕೆ ದೃಢಮಾಡಿದರು.
  • 28 ಇಸ್ರಾ ಯೇಲ್ಯರು ಬಲಗೊಂಡಾಗ ಅವರನ್ನು ಪೂರ್ಣವಾಗಿ ಹೊರಡಿಸಿಬಿಡದೆ ಕಪ್ಪಕೊಡಲು ಕಾನಾನ್ಯರಿಗೆ ನೇಮಕ ಮಾಡಿದರು.
  • 29 ಇದಲ್ಲದೆ ಎಫ್ರಾಯಾಮ್‌ ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾ ನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.
  • 30 ಜೆಬುಲೂನ್ಯರು ಕಿಟ್ರೋನಿನ ವಾಸಿಗಳನ್ನೂ ನಹಲೋಲಿನ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ. ಕಾನಾನ್ಯರಾದ ಇವರು ಅವರಲ್ಲಿ ವಾಸವಾಗಿದ್ದು ಕಪ್ಪ ವನ್ನು ಕೊಡುವವರಾದರು.
  • 31 ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ ಚೀದೋನಿನ ವಾಸಿಗಳನ್ನೂ ಅಹ್ಲಾಬ್‌, ಅಕ್ಜೀಬ್‌, ಹೆಲ್ಬಾ, ಅಫೀಕ್‌, ರೆಹೋಬ್‌ ಪಟ್ಟಣ ಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ.
  • 32 ಆದರೆ ಆಶೇರ್ಯರು ಅವರನ್ನು ಹೊರಡಿಸಿಬಿಡದೆ ಆ ದೇಶದ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸವಾಗಿದ್ದರು.
  • 33 ನಫ್ತಾಲ್ಯರು ಬೇತ್‌ಷೆಮೆಷಿನ ವಾಸಿಗಳನ್ನೂ ಬೇತ ನಾತಿನ ವಾಸಿಗಳನ್ನೂ ಹೊರಡಿಸಿಬಿಡದೆ ಆ ದೇಶ ವಾಸಿಗಳಾದ ಕಾನಾನ್ಯರ ಮಧ್ಯದಲ್ಲಿ ವಾಸಿಸಿದ್ದರು. ಆದರೆ ಬೇತ್‌ಷೆಮೆಷ್‌ ಬೇತನಾತನ ಪಟ್ಟಣವಾಸಿಗಳು ಅವರಿಗೆ ಕಪ್ಪಕೊಡುವವರಾದರು.
  • 34 ಇದಲ್ಲದೆ ಅಮೋರಿಯರು ದಾನನ ಮಕ್ಕಳನ್ನು ತಗ್ಗಿನಲ್ಲಿ ಇಳಿಯಗೊಡದೆ ಬೆಟ್ಟಗಳಿಗೆ ಓಡಿಸಿಬಿಟ್ಟು
  • 35 ತಾವು ಹರ್‌ಹೆರೆಸ್‌ ಬೆಟ್ಟದಲ್ಲಿಯೂ ಅಯ್ಯಾಲೋನಿ ನಲ್ಲಿಯೂ ಶಾಲ್ಬೀಮಿನಲ್ಲಿಯೂ ವಾಸಿಸಬೇಕೆಂದಿದ್ದರು. ಆದರೆ ಯೋಸೇಫನ ಮನೆಯವರ ಕೈ ಭಾರವಾದದ್ದ ರಿಂದ ಅವರಿಗೆ ಕಪ್ಪಕೊಡುವವರಾದರು.
  • 36 ಹೀಗೆಯೇ ಅಮೋರಿಯರ ಮೇರೆಯು ಅಕ್ರಬ್ಬೀಮು ಹಿಡಿದು ಬಂಡೆಯಿಂದ ಮೇಲ್ಗಡೆಗೆ ಹಾದುಹೋಗುವದಾಗಿತ್ತು.