ಯೋಬ 10
  • 1 ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
  • 2 ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.
  • 3 ನೀನು ಬಲಾತ್ಕಾರ ಮಾಡುವದೂ ನಿನ್ನ ಕೈಕೆಲಸವನ್ನು ಅಲಕ್ಷ್ಯಮಾಡುವದೂ ದುಷ್ಟರ ಆಲೋ ಚನೆಯ ಮೇಲೆ ಪ್ರಕಾಶಿಸುವದೂ ನಿನಗೆ ಒಳ್ಳೆಯದೆ ನಿಸುತ್ತದೆಯೋ?
  • 4 ನಿನಗೆ ಮಾಂಸದ ಕಣ್ಣುಗಳುಂಟೋ ಅಥವಾ ಮನುಷ್ಯನು ನೋಡುವಂತೆಯೇ ನೀನೂ ನೋಡುತ್ತೀಯೋ;
  • 5 ನಿನ್ನ ದಿವಸಗಳು ಮನುಷ್ಯನ ದಿವಸಗಳ ಹಾಗಿವೆಯೋ ಅಥವಾ ನಿನ್ನ ವರುಷಗಳು ಮನುಷ್ಯನ ದಿವಸಗಳಂತಿವೆಯೋ
  • 6 ನನ್ನ ಅಕ್ರಮವನ್ನು ವಿಚಾರಿಸುತ್ತೀ; ನನ್ನ ಪಾಪವನ್ನು ಹುಡುಕುತ್ತೀ.
  • 7 ನಾನು ದುಷ್ಟನಲ್ಲವೆಂದೂ ನಿನ್ನ ಕೈಯಿಂದ ತಪ್ಪಿಸುವವನಿಲ್ಲ ವೆಂದೂ ನೀನು ತಿಳುಕೊಳ್ಳುತ್ತೀಯಲ್ಲವೇ;
  • 8 ನಿನ್ನ ಕೈಗಳು ನನ್ನನ್ನು ನಿರ್ಮಿಸಿ ನನ್ನನ್ನು ಸುತ್ತಲೆಲ್ಲಾ ರೂಪಿಸಿದವು. ಆದಾಗ್ಯೂ ನೀನು ನನ್ನನ್ನು ನಾಶಮಾಡುತ್ತೀ.
  • 9 ಕುಂಬಾ ರನ ಮಣ್ಣಿನಂತೆ ನನ್ನನ್ನು ರೂಪಿಸಿದ್ದೀ ಎಂದು ಜ್ಞಾಪಕ ಮಾಡಿಕೋ ಎಂದು ಬೇಡಿಕೊಳ್ಳುತ್ತೇನೆ; ಆದಾಗ್ಯೂ ನನ್ನನ್ನು ಧೂಳಿಗೆ ತಿರುಗಿಸುತ್ತಿಯೋ?
  • 10 ಹಾಲಿನಂತೆ ನನ್ನನ್ನು ಹೊಯ್ಯಲಿಲ್ಲವೋ? ಮೊಸರಿನಂತೆ ನನ್ನನ್ನು ಹೆಪ್ಪಾಗ ಮಾಡಲಿಲ್ಲವೋ?
  • 11 ಚರ್ಮವನ್ನೂ ಮಾಂಸ ವನ್ನೂ ನನಗೆ ತೊಡಿಸಿದಿ; ಎಲುಬುಗಳಿಂದಲೂ ನರಗ ಳಿಂದಲೂ ನನಗೆ ಬೇಲಿ ಹಾಕಿದಿ.
  • 12 ಜೀವವನ್ನೂ ಕೃಪೆಯನ್ನೂ ನನಗೆ ಅನುಗ್ರಹಿಸಿದಿ; ನಿನ್ನ ದರ್ಶನವು ನನ್ನ ಆತ್ಮವನ್ನು ಕಾಪಾಡಿತು.
  • 13 ಆದಾಗ್ಯೂ ಇವುಗ ಳನ್ನು ನಿನ್ನ ಹೃದಯದಲ್ಲಿ ಮರೆಮಾಡಿದಿ; ಇದು ನಿನ್ನ ಬಳಿಯಲ್ಲಿ ಇದೆ ಎಂದು ತಿಳಿದಿದ್ದೇನೆ.
  • 14 ನಾನು ಪಾಪಮಾಡಿದರೆ ನನ್ನನ್ನು ಗುರುತಿಸಿ ನನ್ನ ಅಕ್ರಮವನ್ನು ಪರಿಹರಿಸುವದಿಲ್ಲ.
  • 15 ನಾನು ದುಷ್ಟನಾಗಿದ್ದರೆ ನನಗೆ ಅಯ್ಯೋ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತುವದಿಲ್ಲ; ಗಲಿಬಿಲಿಯಿಂದ ನಾನು ತುಂಬಿದ್ದೇನೆ, ಆದದರಿಂದ ನನ್ನ ಬಾಧೆಯನ್ನು ನೋಡು.
  • 16 ಅದು ಹೆಚ್ಚುತ್ತಿದೆ; ಸಿಂಹದಂತೆ ನನ್ನನ್ನು ಬೇಟೆಯಾಡುವಿ; ಇನ್ನೂ ಆಶ್ಚರ್ಯವಾದವುಗಳನ್ನು ನನಗೆ ತೋರಿಸುವಿ.
  • 17 ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ಇಡುತ್ತೀ. ನಿನ್ನ ಕೋಪವು ನನ್ನ ಮೇಲೆ ಅಧಿಕಗೊಳ್ಳುತ್ತದೆ; ಬದಲಾವಣೆಗಳೂ ಯುದ್ಧವೂ ನನಗೆ ಎದುರಾಗಿವೆ.
  • 18 ಹಾಗಾದರೆ ಯಾಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದಿ? ಯಾವ ಕಣ್ಣು ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.
  • 19 ನಾನು ಇರದವನಂತಿದ್ದು ಗರ್ಭದೊಳಗಿಂದಲೇ ಸಮಾಧಿ ಸೇರುತ್ತಿದ್ದೆನು.
  • 20 ನನ್ನ ದಿವಸಗಳು ಸ್ವಲ್ಪವಲ್ಲವೋ? ಅವುಗಳನ್ನು ತೀರಿಸಿ ನನ್ನನ್ನು ಬಿಟ್ಟುಬಿಡು.
  • 21 ಆಗ ನಾನು ತಿರುಗಿಕೊಳ್ಳದವನಾಗಿ ಕತ್ತಲೆಯ ದೇಶಕ್ಕೆ, ಮರಣದ ನೆರಳಿಗೆ
  • 22 ಮರಣದ ನೆರಳಿನ ಅಂಧಕಾರದ ಹಾಗೆ ಮೊಬ್ಬಿರುವ ಕ್ರಮವಿಲ್ಲದ ಪ್ರಕಾಶವೇ ಅಂಧ ಕಾರದ ಹಾಗಿರುವ ದೇಶಕ್ಕೆ ಹೋಗುವದಕ್ಕಿಂತ ಮುಂಚೆ ಸ್ವಲ್ಪ ವಿಶ್ರಮಿಸಿಕೊಳ್ಳುವೆನು.