ಜ್ಞಾನೋಕ್ತಿಗಳು 4
  • 1 ಮಕ್ಕಳಿರಾ, ತಂದೆಯ ಶಿಕ್ಷಣವನ್ನು ನೀವು ಕೇಳಿರಿ. ವಿವೇಕವನ್ನು ಗ್ರಹಿಸುವಂತೆ ನೋಡಿರಿ.
  • 2 ನಾನು ನಿಮಗೆ ಸುಬೋಧನೆಯನ್ನು ಮಾಡುವೆನು; ನೀವು ನನ್ನ ಕಟ್ಟಳೆಯನ್ನು ಬಿಡಬೇಡಿರಿ.
  • 3 ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ.
  • 4 ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು.
  • 5 ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ.
  • 6 ಅವುಗಳನ್ನು ತ್ಯಜಿಸ ದಿದ್ದರೆ ಅವು ನಿನ್ನನ್ನು ಕಾಯುವವು, ಅವುಗಳನ್ನು ಪ್ರೀತಿಸಿದರೆ ಅವು ನಿನ್ನನ್ನು ಕಾಪಾಡುವವು.
  • 7 ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ.
  • 8 ಆಕೆಯನ್ನು ನೀನು ಮೇಲೆತ್ತಿದರೆ ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿ ಕೊಂಡರೆ ಆಕೆಯು ನಿನ್ನನ್ನು ಘನತೆಗೆ ತರುವಳು.
  • 9 ಆಕೆಯು ನಿನ್ನ ತಲೆಗೆ ಕೃಪೆಯ ಆಭರಣವಾಗಿರುವಳು; ಆಕೆಯು ನಿನಗೆ ಘನತೆಯ ಕಿರೀಟವನ್ನು ಒಪ್ಪಿಸುವಳು.
  • 10 ಓ ನನ್ನ ಮಗನೇ, ಆಲಿಸಿ ನನ್ನ ಮಾತುಗಳನ್ನು ಅಂಗೀಕರಿಸು; ಆಗ ನಿನ್ನ ಜೀವಿತದ ವರುಷಗಳು ಹೆಚ್ಚಾಗುವವು.
  • 11 ಜ್ಞಾನದ ಮಾರ್ಗದಲ್ಲಿ ನಾನು ನಿನಗೆ ಬೋಧಿಸಿದೆನು; ಸರಿಯಾದ ದಾರಿಗಳಲ್ಲಿ ನಾನು ನಿನ್ನನ್ನು ನಡಿಸಿದೆನು.
  • 12 ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಇಕ್ಕಟ್ಟಾಗದು; ನೀನು ಓಡುವಾಗ ಮುಗ್ಗರಿಸುವದಿಲ್ಲ.
  • 13 ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ. ಅದನ್ನು ಕಾಪಾಡು. ಅದು ನಿನ್ನ ಜೀವವಾಗಿದೆ.
  • 14 ದುಷ್ಟರ ದಾರಿಯೊಳಗೆ ಪ್ರವೇಶಿಸದಿರು, ಕೆಟ್ಟವರ ಮಾರ್ಗದಲ್ಲಿ ಹೋಗಬೇಡ.
  • 15 ಅದನ್ನು ತಪ್ಪಿಸು, ಅದರ ಪಕ್ಕದಲ್ಲಿ ಹಾದು ಹೋಗ ಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ.
  • 16 ಕೇಡು ಮಾಡದಿದ್ದರೆ ಅವರು ನಿದ್ರೆಹೋಗುವದಿಲ್ಲ; ಯಾರ ನ್ನಾದರೂ ಬೀಳಿಸದೆ ಇದ್ದರೆ ಅವರ ನಿದ್ರೆಗೆ ಭಂಗ ವಾಗುವದು.
  • 17 ಅವರು ದುಷ್ಟತನದ ರೊಟ್ಟಿಯನ್ನು ತಿಂದು ಬಲಾತ್ಕಾರದ ದ್ರಾಕ್ಷಾರಸವನ್ನು ಕುಡಿಯು ತ್ತಾರೆ.
  • 18 ಆದರೆ ಸಂಪೂರ್ಣವಾದ ದಿನಕ್ಕೆ ಹೆಚ್ಚೆಚ್ಚಾಗಿ ಹೊಳೆಯುವ ದೀಪದಂತೆ ನ್ಯಾಯವಂತರ ದಾರಿಯು ಹೊಳೆಯುವದು.
  • 19 ದುಷ್ಟರ ಮಾರ್ಗವು ಕತ್ತಲೆ ಯಂತಿದೆ. ಅವರು ಯಾವದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
  • 20 ನನ್ನ ಮಗನೇ, ನನ್ನ ಮಾತುಗಳನ್ನು ಆಲಿಸು; ನನ್ನ ನುಡಿಗಳಿಗೆ ಕಿವಿಗೊಡು.
  • 21 ಅವುಗಳು ನಿನ್ನ ಕಣ್ಣುಗಳಿಗೆ ತಪ್ಪಿಹೋಗದೆ ಇರಲಿ; ಅವುಗಳನ್ನು ನಿನ್ನ ಹೃದಯದ ಮಧ್ಯದಲ್ಲಿ ಇಟ್ಟುಕೋ.
  • 22 ಅವುಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ ಅವರ ದೇಹ ಕ್ಕೆಲ್ಲಾ ಆರೋಗ್ಯವೂ ಆಗಿವೆ.
  • 23 ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು.
  • 24 ವಕ್ರಬಾಯಿ ಯನ್ನು ನಿನ್ನಿಂದ ತೆಗೆದುಬಿಡು; ಕೆಟ್ಟ ತುಟಿಗಳನ್ನು ನಿನ್ನಿಂದ ದೂರ ಇಡು.
  • 25 ನಿನ್ನ ಕಣ್ಣುಗಳು ಮುಂದೆಯೇ ನೋಡಲಿ. ನಿನ್ನ ಕಣ್ಣು ರೆಪ್ಪೆಗಳು ನೆಟ್ಟಗೆ ನಿನ್ನ ಮುಂದೆಯೇ ನೋಡಲಿ.
  • 26 ನೀನು ನಡೆಯುವ ದಾರಿ ಯನ್ನು ವಿಮರ್ಶಿಸಿ ನೋಡು; ನಿನ್ನ ಎಲ್ಲಾ ಮಾರ್ಗ ಗಳು ಸ್ಥಿರವಾಗಿರಲಿ.
  • 27 ನಿನ್ನ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು.