ಯೊಹೋಶುವ 17
  • 1 ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು;
  • 2 ಮನಸ್ಸೆಯ ಉಳಿದ ಮಕ್ಕಳಾದ ಅಬೀಯೇಜೆರಿನ ಮಕ್ಕಳಿಗೂ ಹೇಲೆಕನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮನ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆವಿಾದನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಬಾಧ್ಯತೆ ಉಂಟಾಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗ ನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು.
  • 3 ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾ ದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರರಿಲ್ಲ; ಆದರೆ ಮಹ್ಲಾ, ನೋವಾ, ಹೋಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಕುಮಾರ್ತೆ ಯರಿದ್ದರು.
  • 4 ಇವರು ಯಾಜಕನಾದ ಎಲ್ಲಾಜಾರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಪ್ರಧಾನರುಗಳ ಬಳಿಗೂ ಬಂದು ಅವರಿಗೆನಮ್ಮ ಸಹೋದರರಲ್ಲಿ ನಮಗೆ ಬಾಧ್ಯತೆಯನ್ನು ಕೊಡು ವಂತೆ ಕರ್ತನು ಮೋಶೆಗೆ ಆಜ್ಞಾಪಿಸಿದನು ಅಂದರು. ಆದದರಿಂದ ಅವರ ತಂದೆಗಳ ಸಹೋದರರ ಮಧ್ಯ ದಲ್ಲಿ ಅವರಿಗೆ ಕರ್ತನ ವಾಕ್ಯದ ಹಾಗೆಯೇ ಬಾಧ್ಯತೆ ಯನ್ನು ಕೊಟ್ಟನು.
  • 5 ಯೊರ್ದನಿಗೆ ಆಚೆಯಲ್ಲಿರುವ ಗಿಲ್ಯಾದೂ ಬಾಷಾನೂ ಎಂಬ ದೇಶಗಳ ಹೊರತು ಮನಸ್ಸೆಗೆ ಚೀಟಿನಲ್ಲಿ ಬಿದ್ದ ದೇಶ ಹತ್ತು ಪಾಲು ಸಿಕ್ಕಿದವು.
  • 6 ಇದಲ್ಲದೆ ಮನಸ್ಸೆಯ ಕುಮಾರ್ತೆಯರು ಅವನ ಕುಮಾರರಲ್ಲಿ ಬಾಧ್ಯತೆಯನ್ನು ಹೊಂದಿದರು. ಆದರೆ ಉಳಿದ ಮನಸ್ಸೆಯ ಕುಮಾರರಿಗೆ ಗಿಲ್ಯಾದ್‌ ದೇಶ ದೊರೆಯಿತು.
  • 7 ಮನಸ್ಸೆಯ ಮೇರೆ ಯಾವದಂದರೆ; ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿಗೂ ಅಲ್ಲಿಂದ ಬಲ ಪಾರ್ಶ್ವವಾಗಿ ತಪ್ಪೂಹದ ನಿವಾಸಗಳಿಗೆ ಹೋಗುವದು.
  • 8 ತಪ್ಪೂಹ ಭೂಮಿ ಮನಸ್ಸೆಯದಾಗಿತ್ತು. ಆದರೆ ಮನಸ್ಸೆಯ ಮೇರೆಯಲ್ಲಿರುವ ತಪ್ಪೂಹ ಎಫ್ರಾಯಾ ಮನ ಮಕ್ಕಳದ್ದಾಗಿತ್ತು.
  • 9 ಆ ಮೇರೆ ಕಾನಾ ನದಿಯ ದಕ್ಷಿಣಕ್ಕೆ ನದಿಯವರೆಗೂ ಇಳಿದು ಹೋಗುವದು. ಅಲ್ಲಿರುವ ಮನಸ್ಸೆಯ ಪಟ್ಟಣಗಳಲ್ಲಿ ಕೆಲವು ಪಟ್ಟಣಗಳು ಎಫ್ರಾಯಾಮನವಾಗಿದ್ದವು. ಮನಸ್ಸೆಯ ಮೇರೆಯು ನದಿಯ ಉತ್ತರಕ್ಕಿರುವ ಸಮುದ್ರದ ವರೆಗೂ ಹೋಗಿ ರುವದು.
  • 10 ನದಿಯ ದಕ್ಷಿಣ ಸೀಮೆ ಎಫ್ರಾಯಾಮ ನದು; ಉತ್ತರ ಸೀಮೆಯು ಮನಸ್ಸೆಯದು, ಸಮುದ್ರವು ಅದರ ಮೇರೆಯಾಗಿರುವದು.
  • 11 ಉತ್ತರಕ್ಕೆ ಇರುವ ಆಶೇರಿನಿಂದ ಪೂರ್ವಕ್ಕೆ ಇರುವ ಇಸ್ಸಾಕಾರನ ವರೆಗೆ ಒಟ್ಟಿಗೆ ಕೂಡಿಕೊಳ್ಳುವದು. ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದ ಲ್ಲಿಯೂ ಇರುವ ಮೂರು ಸೀಮೆಗಳಾದ ಬೇತ್‌ಷೆ ಯಾನ್‌ ಇಬ್ಲೆಯಾಮ್‌ ದೋರ್‌ ಎಂದೋರ್‌ ತಾನಕ್‌ ಮೆಗಿದ್ದೋನ್‌ ಅವುಗಳ ಗ್ರಾಮಗಳೂ ಇವು ಮನಸ್ಸೆ ಯವು.
  • 12 ಆದರೆ ಮನಸ್ಸೆಯ ಮಕ್ಕಳು ಆ ಪಟ್ಟಣಗಳ ನಿವಾಸಿಗಳನ್ನು ಹೊರಡಿಸುವದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ಇಷ್ಟ ಪಟ್ಟರು.
  • 13 ಆದರೆ ಇಸ್ರಾಯೇಲ್‌ ಮಕ್ಕಳು ಬಲಗೊಂಡಾಗ ಕಾನಾನ್ಯರನ್ನು ಹೊರಡಿಸದೆ ಅವರನ್ನು ಕಪ್ಪ ಕೊಡುವವರಾಗುವಂತೆ ಮಾಡಿಕೊಂಡರು.
  • 14 ಯೋಸೇಫನ ಮಕ್ಕಳ ಜನಾಂಗ ಯೆಹೋಶು ವನ ಸಂಗಡ ಮಾತನಾಡಿ--ಕರ್ತನು ನನ್ನನ್ನು ಈ ವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ ನಾನು ಮಹಾಜನಾಂಗವಾಗಿದ್ದೇನೆ. ಹೀಗಿರುವಾಗ ನೀನು ನನಗೆ ಬಾಧ್ಯೆತೆಯಾಗಿ ಒಂದೇ ಭಾಗವನ್ನು ಒಂದೇ ಪಾಲನ್ನು ಕೊಟ್ಟದ್ದು ಯಾಕೆ ಅಂದರು.
  • 15 ಅದಕ್ಕೆ ಯೆಹೋಶುವನು ಪ್ರತ್ಯುತ್ತರವಾಗಿ ಅವರಿಗೆ--ನೀನು ಮಹಾಜನಾಂಗವಾಗಿದ್ದು ನಿನಗೆ ಎಫ್ರಾಯಾಮಿನ ಪರ್ವತವು ಇಕ್ಕಟ್ಟಾಗಿದರೆ ನೀನು ಪೆರಿಜ್ಜೀಯರ ಮತ್ತು ರೆಫಾಯರ ದೇಶದಲ್ಲಿರುವ ಅಡವಿಗೆ ಹೋಗಿ ಅದನ್ನು ಕಡಿದು ನಿನಗೋಸ್ಕರ ಸ್ಥಳಮಾಡಿಕೋ, ಅಂದನು.
  • 16 ಅದಕ್ಕೆ ಯೋಸೇಫನ ಮಕ್ಕಳು--ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿ ಇರುವ ಬೇತ್‌ಷೆಯಾನ್‌ನಲ್ಲಿಯೂ ಅದರ ಊರು ಗಳಲ್ಲಿಯೂ ಇಜ್ರೇಲಿನ ತಗ್ಗಿನಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಉಂಟು ಅಂದರು.
  • 17 ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯಾಮನಿಗೂ ಮನಸ್ಸೆಗೂ--ನೀವು ಮಹಾ ಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವದು;
  • 18 ಅದು ಅಡವಿಯಾಗಿದೆ; ಅದನ್ನು ನೀವು ಕಡಿಯ ಬೇಕು. ಅದರ ಅಂತ್ಯಗಳ ವರೆಗೂ ನಿಮ್ಮದಾಗಿರುವದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿ ಬಿಡುವಿರಿ ಅಂದನು.