ಯೆಹೆಜ್ಕೇಲ 35
  • 1 ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ,
  • 2 ಮನುಷ್ಯಪುತ್ರನೇ, ನೀನು ಸೇಯಾರ್‌ ಪರ್ವತಕ್ಕೆ ಅಭಿಮುಖವಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸು;
  • 3 ಅದಕ್ಕೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಸೇಯಾರ್‌ ಪರ್ವತವೇ, ನಾನು ನಿನಗೆ ವಿರುದ್ಧವಾಗಿ ದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
  • 4 ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವಿ; ಆಗ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
  • 5 ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.
  • 6 ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.
  • 7 ಹೀಗೆ ನಾನು ಸೇಯಾರ್‌ ಪರ್ವತವನ್ನು ಸಂಪೂರ್ಣ ಹಾಳು ಮಾಡುವೆನು; ಅದರೊಳಗೆ ಹಾದು ಹೋಗು ವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.
  • 8 ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿ ಸುವರು. ನಿನ್ನ ಕತ್ತಿಯಿಂದ ಹತವಾದವರು ನಿನ್ನ ಹಳ್ಳ ಕೊಳ್ಳಗಳಲ್ಲಿಯೂ ಬೀಳುವರು.
  • 9 ನಾನು ನಿನ್ನನ್ನು ನಿತ್ಯ ನಾಶಕ್ಕೆ ಗುರಿಮಾಡುವೆನು; ನಿನ್ನ ನಗರಗಳು ಹಿಂತಿರುಗುವದಿಲ್ಲ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
  • 10 ಕರ್ತನು ಅವುಗಳಲ್ಲಿರುವದರಿಂದ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನವಾಗು ವವು. ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ.
  • 11 ಆದದರಿಂದ ದೇವರಾದ ಕರ್ತನು ಹೇಳುತ್ತಾನೆ--ನನ್ನ ಜೀವದಾಣೆ, ನಾನು ನಿನ್ನ ಕೋಪದ ಪ್ರಕಾರವೂ ನೀನು ದ್ವೇಷದಿಂದ ಅವರಿಗೆ ವಿರುದ್ಧವಾಗಿ ನಡೆಸಿದ ಹೊಟ್ಟೇಕಿಚ್ಚಿನ ಪ್ರಕಾರವೂ ನಿನಗೆ ನ್ಯಾಯತೀರಿಸಿದ ಮೇಲೆ ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.
  • 12 ಆಗ ನಾನೇ ಕರ್ತನೆಂದು ನೀನು ತಿಳಿಯುವಿ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ--ಅವು ಹಾಳಾಗಿವೆ ನಮಗೆ ಆಹಾರವಾಗಿ ಕೊಡಲ್ಪಟ್ಟಿವೆ ಎಂದು ಹೇಳಿ ಮಾತ ನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಕೇಳಿರುವೆನೆಂದು ತಿಳಿಯುವಿ.
  • 13 ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ಕೊಚ್ಚಿದ್ದನ್ನೂ ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.
  • 14 ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾವಾಗ ಸಂಪೂರ್ಣ ಭೂಮಿಯು ಸಂತೋಷಪಡು ತ್ತದೋ ಆಗ ನಾನು ನಿನ್ನನ್ನು ಹಾಳುಮಾಡುವೆನು.
  • 15 ಹೇಗೆ ನೀನು ಇಸ್ರಾಯೇಲ್ಯರ ಸ್ವಾತಂತ್ರ್ಯದ ನಾಶನಕ್ಕೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಓ ಸೇಯಾರ್‌ ಪರ್ವತವೇ ಮತ್ತು ಸಮಸ್ತ ಎದೋಮೇಸಂಪೂರ್ಣವಾಗಿ ಹಾಳಾಗುವಿ; ಆಗ ನಾನೇ ಕರ್ತ ನೆಂದು ನಿಮಗೆ ತಿಳಿಯುವದು.