1 ಪೂರ್ವಕಾಲದ ವೃತ್ತಾಂತ 4
  • 1 ಯೆಹೂದನ ಕುಮಾರರು--ಪೇರಚನು, ಹೆಚ್ರೋನನು, ಕರ್ವಿಾಯು, ಹೂರನು, ಶೋಬಾಲನು.
  • 2 ಶೋಬಾಲನ ಮಗನಾದ ರೆವಾ ಯನು ಯಹತನನ್ನು ಪಡೆದನು; ಯಹತನು ಅಹೂಮೈನನ್ನೂ ಲಹದನನ್ನೂ ಪಡೆದನು. ಇವರೇ ಚೊರ್ರದ ಸಂತತಿಗಳು.
  • 3 ಎಟಾಮನ ತಂದೆಯಿಂದ ಹುಟ್ಟಿದವರು ಯಾರಂದರೆ--ಇಜ್ರೇಯೇಲನು, ಇಷ್ಮನು, ಇಬ್ಬಾಷನು ಅವರ ಸಹೋದರಿಯಾದ ಹಚೆಲೆಲ್‌ಪೋನಿ ಎಂಬ ವಳು.
  • 4 ಪೆನೂವೇಲನು ಗೆದೋರಿನವರಿಗೆ ತಂದೆ ಯಾಗಿದ್ದನು. ಏಜೆರನು ಹೂಷಾಹ್ಯರನಿಗೆ ತಂದೆ ಯಾಗಿದ್ದನು. ಇವರು ಬೇತ್ಲೆಹೇಮಿಗೆ ತಂದೆಯಾ ಗಿದ್ದ ಎಫ್ರಾತಾನ ಚೊಚ್ಚಲ ಮಗನಾದ ಹೂರನ ಕುಮಾರರು.
  • 5 ತೆಕೋವದ ತಂದೆಯಾದ ಅಷ್ಹೂರನಿಗೆ ಹೆಲಾ ಹಳು, ನಾರಳು ಎಂಬ ಇಬ್ಬರು ಪತ್ನಿಯರಿದ್ದರು.
  • 6 ನಾರಳು ಅವನಿಗೆ ಅಹುಜ್ಜಾಮನನ್ನೂ ಹೇಫೆರನನ್ನೂ ತೇಮಾನ್ಯನನ್ನೂ ಅಹಷ್ಟಾರ್ಯನನ್ನೂ ಹೆತ್ತಳು.
  • 7 ಇವರೇ ನಾರಳ ಮಕ್ಕಳು. ಹೆಲಾಹಳ ಮಕ್ಕಳು ಚೆರೆತೆನು, ಇಚ್ಹಾರನು, ಎತ್ನಾನನು.
  • 8 ಕೋಚನು ಆನೂ ಬನನ್ನೂ ಚೊಬೇಬನನ್ನೂ ಹಾರುಮನ ಮಗನಾದ ಅಹರ್ಹೇಲನ ಸಂತತಿಗಳನ್ನೂ ಪಡೆದನು.
  • 9 ಯಾಬೇ ಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ -- ನಾನು ಇವನನ್ನು ವ್ಯಥೆಯಿಂದ ಹೆತ್ತೆನೆಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
  • 10 ಆದರೆ ಯಾಬೇಚನು ಇಸ್ರಾಯೇಲಿನ ದೇವರನ್ನು ಕೂಗಿ ಹೇಳಿದ್ದು--ನೀನು ನನ್ನನು ನಿಜವಾಗಿ ಆಶೀರ್ವ ದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿನ್ನ ಕೈ ನನ್ನ ಸಂಗಡ ಇರಲಿ; ಅದು ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನು ಕೇಡಿನಿಂದ ತಪ್ಪಿಸು. ಮತ್ತು ಅವನು ಬೇಡಿಕೊಂಡದ್ದನ್ನು ದೇವರು ದೊರಕಿಸಿದನು.
  • 11 ಇದಲ್ಲದೆ ಶೂಹನ ಸಹೋದರನಾದ ಕೆಲೂಬನು
  • 12 ಎಷ್ಟೋನನು ಮೆಹೀರನನ್ನು ಪಡೆದನು. ಎಷ್ಟೋನನ ತಂದೆಯಾದ ಬೆತ್ರಾಫನನ್ನೂ ಪಾಸೇಹನನ್ನೂ ಇರ್ನಾ ಹಷಿನವರ ತಂದೆಯಾದ ತೆಹಿನ್ನನನ್ನೂ ಪಡೆದನು.
  • 13 ಇವರೇ ರೇಕಾಹ್ಯರು. ಕೆನಾಜನ ಕುಮಾರರು--ಒತ್ನೀಯೇಲನು ಸೆರಾಯನು. ಒತ್ನೀಯೇಲನ ಕುಮಾ ರರು--ಹತತನು.
  • 14 ಮೆಯೋನೋತೈಯು ಒಫ್ರಾಹ ನನ್ನು ಪಡೆದನು; ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮ್ಯರ ತಂದೆಯಾದ ಯೋವಾಬನನ್ನು ಪಡೆದನು.
  • 15 ಯೆಫುನ್ನೆಯ ಮಗನಾದ ಕಾಲೇಬನ ಕುಮಾರರು--ಈರುವು, ಏಲನು, ನಾಮನು, ಏಲನ ವರು, ಕೆನಜನು.
  • 16 ಯೆಹಲ್ಲೆಲೇಲನ ಕುಮಾರರು -- ಜೀಫನು, ಜೀಫಾನು, ತೀರ್ಯನು, ಅಸರೇಲನು. ಎಜ್ರನ ಕುಮಾ ರರು --
  • 17 ಯೆತೆರನು, ಮೆರೆದನು, ಏಫೆರನು, ಯಾಲೋನನು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮಳನ್ನೂ ಶೆಮ್ಮೈಯನ್ನೂ ಎಷ್ಟೆಮೋವನ ತಂದೆಯಾದ ಇಷ್ಟಹನನ್ನೂ ಹೆತ್ತಳು.
  • 18 ಇದಲ್ಲದೆ ಅವನ ಹೆಂಡತಿಯಾದ ಯೆಹೂದ್ಯಳು ಗೆದೋರ್ಯನ ತಂದೆಯಾದ ಯೆರೆದನನ್ನೂ ಸೋಕೋವಿನ ತಂದೆ ಯಾದ ಹೆಬೆರನನ್ನೂ ಜಾನೋಹನ ತಂದೆಯಾದ ಯೆಕೊತೀಯೇಲನನ್ನೂ ಹೆತ್ತಳು. ಇವರೇ ಮೆರೆದನು ತಕ್ಕೊಂಡ ಫರೋಹನ ಮಗಳಾದ ಬಿತ್ಯಳ ಕುಮಾರರು.
  • 19 ನಹಾಮನ ಸಹೋದರಿಯಾದ ಹೋದೀಯಳೆಂಬ ಅವನ ಹೆಂಡತಿಯ ಕುಮಾರರು -- ಗರ್ಮ್ಯನಾದ ಕೆಯಾಲನ ತಂದೆಯು, ಮಾಕಾತ್ಯನಾದ ಎಷ್ಟೆಮೋ ವನು.
  • 20 ಶೀಮೋನನ ಕುಮಾರರು--ಅಮ್ನೋನನು, ರಿನ್ನನು, ಬೆನ್ಹನಾನನು, ತೀಲೋನನು. ಇಷ್ಷೀಯನ ಕುಮಾರರು--ಜೋಹೇತನು ಬೆನ್‌ಜೋಹೇತನು.
  • 21 ಯೆಹೂದನ ಮಗನಾದ ಶೇಲನ ಕುಮಾರರು --ಲೇಕಾಹ್ಯದ ತಂದೆಯಾದ ಏರನು, ಮರೇಷದ ತಂದೆಯಾದ ಲದ್ದನು, ಬೇತಪ್ಬೇವನ ಮನೆಯವರಾಗಿ ರುವ ನಾರುಗಳಿಂದ ನಯವಾದ ಕೆಲಸಮಾಡಿದವರ ಮನೆಯ ಸಂತತಿಗಳು.
  • 22 ಯೊಕೀಮನು ಮೋವಾಬಿ ನಲ್ಲಿ ಅಧಿಕಾರವುಳ್ಳವರಾದ ಕೊಜೇಬವು ಯೋವಾ ಷವು ಸಾರಾಫವು ಎಂಬ ಸ್ಥಳಗಳ ಮನುಷ್ಯರೂ ಯೆಷೂಬಿಹೇಮಿನಲ್ಲಿ ವಾಸವಾಗಿದ್ದವರೂ. ಇವು ಪೂರ್ವದ ಕಾರ್ಯಗಳು.
  • 23 ಇವರೇ ಕುಂಬಾರರು. ಇವರು ಗಿಡಗಳ ಕೆಳಗೂ ಬೇಲಿಯ ಅಂಚಿನಲ್ಲಿಯೂ ವಾಸವಾಗಿರುವವರು; ಅಲ್ಲಿ ಅವರು ಅರಸನ ಕೆಲಸ ಕ್ಕೋಸ್ಕರ ವಾಸವಾಗಿದ್ದರು.
  • 24 ಸಿಮೆಯೋನನ ಕುಮಾರರು -- ನೆಮೂವೇ ಲನು, ಯಾವಿಾನನು, ಯಾರೀದನು, ಜೆರಹನು, ಸೌಲನು.
  • 25 ಇವನ ಮಗನಾದ ಶಲ್ಲುಮನು, ಇವನ ಮಗನಾದ ಮಿಬ್ಸಾಮನು, ಇವನ ಮಗನಾದ ಮಿಷ್ಮ ವನು.
  • 26 ಮಿಷ್ಮಾಗನ ಕುಮಾರರು--ಇವನ ಮಗನಾದ ಹಮ್ಮೂವೇಲನು, ಇವನ ಮಗನಾದ ಜಕ್ಕೂರನು, ಇವನ ಮಗನಾದ ಶಿವ್ಮೆಾ.
  • 27 ಶಿಮ್ಮಿಗೆ ಹದಿನಾರು ಮಂದಿ ಕುಮಾರರೂ ಆರು ಮಂದಿ ಕುಮಾರ್ತೆಯರೂ ಇದ್ದರು. ಆದರೆ ಇವನ ಸಹೋದರರಿಗೆ ಬಹಳ ಮಕ್ಕಳಿರಲಿಲ್ಲ; ಅವರ ಸಮಸ್ತ ಸಂತತಿಯು ಯೆಹೂ ದದ ಮಕ್ಕಳ ಹಾಗೆ ಹೆಚ್ಚಾಗಲಿಲ್ಲ.
  • 28 ಇವರು ಬೇರ್ಷೆ ಬದಲ್ಲಿಯೂ ಮೋಲಾದದಲ್ಲಿಯೂ
  • 29 ಹಚರ್‌ ಷೂವಾಲ್ತ್‌ನಲ್ಲಿಯೂ ಬಿಲ್ಹದಲ್ಲಿಯೂ ಏಚೆಮನ ಲ್ಲಿಯೂ
  • 30 ತೋಲಾದಿನಲ್ಲಿಯೂ ಬೆತುವೇಲಿನ ಲ್ಲಿಯೂ ಹೊರ್ಮದಲ್ಲಿಯೂ
  • 31 ಚಿಕ್ಲಗಿನಲ್ಲಿಯೂ ಬೇತ್‌ಮರ್ಕಾಬೋತ್‌ದಲ್ಲಿಯೂ ಹಚರ್‌ ಸೂಸೀಮ ದಲ್ಲಿಯೂ ಬೇತ್‌ಬಿರೀಯಲ್ಲಿಯೂ ಶಾರಯಿಮನ ಲ್ಲಿಯೂ ವಾಸವಾಗಿದ್ದರು. ದಾವೀದನ ಆಳಿಕೆಯ ವರೆಗೂ ಇವು ಅವರ ಪಟ್ಟಣಗಳಾಗಿದ್ದವು.
  • 32 ಅವರ ಊರುಗಳು ಯಾವವಂದರೆ--ಏಟಾಮು, ಅಯಿನು, ರಿಮ್ಮೋನು, ತೋಕೆನು, ಆಷಾನು ಐದು ಪಟ್ಟಣಗಳು.
  • 33 ಇದಲ್ಲದೆ ಆ ಪಟ್ಟಣಗಳ ಸುತ್ತಲಿದ್ದ ಊರುಗಳು ಬಾಳದ ವರೆಗೂ ಅವರಿಗೆ ಇದ್ದವು. ಇವೇ ಅವರು ವಾಸವಾಗಿರುವ ಸ್ಥಳಗಳೂ ಅವರ ವಂಶಾವಳಿಗಳೂ.
  • 34 ಮೆಷೋಬಾಬನು, ಯಮ್ಲೇಕನು, ಅಮಚ್ಯನ ಮಗನಾದ ಯೋಷನು, ಯೋವೇಲನು.
  • 35 ಅಸಿ ಯೇಲನ ಮಗನಾದ ಸೆರಾಯನ ಮಗನಾದ ಯೊಷಿಬ್ಯನ ಮಗನಾದ ಯೇಹೂ.
  • 36 ಎಲ್ಯೋವೇನೈ, ಯಾಕೋಬನು, ಯೆಷೋಹಾಯನು, ಅಸಾಯನು, ಅದೀಯೇಲನು, ಯೆಸೀಮಿಯೇಲನು, ಬೆನಾಯನು.
  • 37 ಶೆಮಾಯನ ಮಗನಾದ ಶಿಮ್ರಿಯ ಮಗನಾದ ಯೆದಾಯನ ಮಗನಾದ ಅಲ್ಲೋನನ ಮಗನಾದ ಶಿಪ್ಫಿಯ ಮಗನಾದ ಜೀಜನು.
  • 38 ಹೆಸರು ಹೆಸರಾಗಿ ಬರೆಯಲ್ಪಟ್ಟವರಾದ ಇವರು ತಮ್ಮ ಸಂತತಿಗಳಲ್ಲಿ ಪ್ರಭುಗಳಾಗಿದ್ದರು; ಅವರ ಪಿತೃಗಳ ಮನೆ ಬಹಳ ಅಭಿವೃದ್ಧಿಯಾಯಿತು.
  • 39 ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದ ವರೆಗೂ ಹೋದರು.
  • 40 ಅವರು ರಸವತ್ತಾದ ಒಳ್ಳೇ ಮೇವನ್ನು ಕಂಡು ಕೊಂಡರು. ಆ ದೇಶವು ವಿಸ್ತಾರವಾಗಿಯೂ ಶಾಂತ ವಾಗಿಯೂ ಸಮಾಧಾನವಾಗಿಯೂ ಇತ್ತು; ಪೂರ್ವ ದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.
  • 41 ಹೆಸರು ಹೆಸರಾಗಿ ಬರೆಯಲ್ಪಟ್ಟವರಾದ ಇವರು ಯೆಹೂದದ ಅರಸನಾದ ಹಿಜ್ಕೀಯನ ದಿವಸಗಳಲ್ಲಿ ಬಂದು ಅಲ್ಲಿ ಸಿಕ್ಕಿದ ಅವರ ಡೇರೆಗಳನ್ನೂ ನಿವಾಸ ಗಳನ್ನೂ ಹೊಡೆದು ಅವರನ್ನು ಸಂಪೂರ್ಣ ನಾಶಮಾಡಿ ಅಲ್ಲಿ ತಮ್ಮ ಮಂದೆಗಳಿಗೆ ಮೇವು ಇರುವದರಿಂದ ಇಂದಿನ ವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದಾರೆ.
  • 42 ಇದಲ್ಲದೆ ಅವರಲ್ಲಿ ಸಿಮೆಯೋನನ ಕುಮಾರರಲ್ಲಿ ಐನೂರು ಮಂದಿ ಇಷ್ಷೀಯ ಕುಮಾರರಾದ ಪೆಲಟ್ಯ ನನ್ನೂ ನೆಗರ್ಯನನ್ನೂ ರೆಫಾಯನನ್ನೂ ಉಜ್ಜೀ ಯೇಲನನ್ನೂ ತಮ್ಮ ಅಧಿಪತಿಗಳಾಗಿ ಮಾಡಿಕೊಂಡು ಸೇಯಾರ್‌ ಪರ್ವತಕ್ಕೆ ಹೋಗಿ ತಪ್ಪಿಸಿಕೊಂಡು ಹೋದ
  • 43 ಉಳಿದ ಅಮಾಲೇಕ್ಯರನ್ನು ಹೊಡೆದು ಅಲ್ಲಿ ಇಂದಿನ ವರೆಗೂ ವಾಸವಾಗಿದ್ದಾರೆ.